ಪ್ರತಿಲಿಪಿಯು ವೇಗವಾಗಿ ಬೆಳೆಯುತ್ತಿರುವ ಭಾರತದ ಅತೀದೊಡ್ಡ ಸ್ವ-ಪ್ರಕಾಶನ ವೇದಿಕೆ. ಕನ್ನಡ,ತಮಿಳು,ತೆಲುಗು,ಮಲಯಾಳಂ,ಹಿಂದಿ,ಗುಜರಾತಿ,ಬೆಂಗಾಳಿ,ಮರಾಠಿ,ಉರ್ದು,ಪಂಜಾಬಿ, ಓಡಿಯಾ ಮತ್ತು ಇಂಗ್ಲಿಷ್ ಈ ಹನ್ನೆರಡೂ ಭಾಷೆಗಳಲ್ಲಿಯೂ ಅಸ್ತಿತ್ವದಲ್ಲಿದ್ದು, ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿದೆ.ಈ ಹನ್ನೆರಡೂ ಭಾಷೆಗಳಲ್ಲಿಯೂ ನೀವು ಕಥೆ, ಕವನ, ಲೇಖನ, ವಿಮರ್ಶೆ, ಕಾದಂಬರಿ, ನಿಯತಕಾಲಿಕೆ, ಪತ್ರ, ಇ-ಪುಸ್ತಕ ಹೀಗೆ ಯಾವುದೇ ಪ್ರಕಾರದಲ್ಲಾದರೂ ಬರಹಗಳನ್ನು ಪ್ರಕಟಿಸಬಹುದು, ಓದಬಹುದು ಮತ್ತು ಡೌನ್ಲೋಡ್ ಮಾಡಿಕೊಳ್ಳಬಹುದು. ಪ್ರತಿಲಿಪಿಯಲ್ಲಿನ 1,50,000 ಕ್ಕೂ ಅಧಿಕ ಬರಹಗಾರಾರ ಒಟ್ಟು ಬರಹಗಳು ಈ ವರೆಗೂ 50ಕೋಟಿಗೂ ಅಧಿಕ ವೀಕ್ಷಣೆಯನ್ನು ಕಂಡಿದೆ.\
ಓದಿರಿ : ಪ್ರೀತಿ, ಸಿನಿಮಾ, ಸಮಾಜ, ವಿಜ್ಞಾನ, ತಂತ್ರಜ್ಞಾನ, ಜೀವನ, ಸ್ಫೂರ್ತಿದಾಯಕ, ಮಹಿಳೆ, ಹಾರರ್, ಥ್ರಿಲ್ಲರ್, ಕಲ್ಪಿತ, ಅಕಲ್ಪಿತ, ಹಾಸ್ಯ, ಆರೋಗ್ಯ, ಪ್ರವಾಸಿ, ಅಡುಗೆ, ಜೀವನ ಚರಿತ್ರೆ, ಕ್ಲಾಸಿಕ್ಸ್, ಹೀಗೆ ಈ ಯಾವುದೇ ಪ್ರಭೇದದ ನೂರಾರು, ಸಾವಿರಾರು ಬರಹಗಳನ್ನು ನೀವು ಕಥೆ, ಕವನ, ಲೇಖನ, ವಿಮರ್ಶೆ, ಪ್ರಬಂಧ, ಕಾದಂಬರಿ, ಇ-ಪುಸ್ತಕ, ಇವೇ ಮೊದಲಾದ ಪ್ರಕಾರಗಳಲ್ಲಿ ಉಚಿತವಾಗಿ ಓದಬಹುದು.
ಸೇರಿರಿ : ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ, ಸಾಹಿತ್ಯ ವಲಯದಲ್ಲಿ ಮನ್ನಣೆಯನ್ನು ಪಡೆದಿರುವ ಭಾರತೀಯ ಭಾಷಾ ಬರಹಗಾರರ ಬೃಹತ್ ಸಮುದಾಯವನ್ನು ನೀವು ಪ್ರತಿಲಿಪಿಯ ಮೂಲಕ ಸೇರಬಹುದು.
ಉಚಿತವಾಗಿ ಬರೆಯಿರಿ : ಲ್ಯಾಪ್ಟಾಪ್ ಅಥವಾ ಡೆಸ್ಕ್ಟಾಪ್ ಮೂಲಕ ನಿಮ್ಮ ಕಥೆ, ಕವನ, ಲೇಖನ, ವಿಮರ್ಶೆ, ಪ್ರಬಂಧ, ಕಾದಂಬರಿ, ಇ-ಪುಸ್ತಕ, ಹೀಗೆ ಏನನ್ನು ಬೇಕಾದರೂ ಪ್ರತಿಲಿಪಿ ವೇದಿಕೆಯಲ್ಲಿ ನೀವು ಉಚಿತವಾಗಿ ಬರೆದು, ಪ್ರಕಟಿಸುವ ಮೂಲಕ ನಮ್ಮ ವೇದಿಕೆಯಲ್ಲಿನ ಮೂವತ್ತು ಲಕ್ಷಕ್ಕೂ ಮಿಕ್ಕ ಸಹೃದಯ ಓದುಗರಿಗೆ ನಿಮ್ಮ ಬರಹದ ಔತಣವನ್ನು ಉಣಬಡಿಸಬಹುದು ಹಾಗೂ ಅವರ ಅಭಿಪ್ರಾಯ ತಿಳಿಯಬಹುದು.
ತೊಡಗಿಸಿಕೊಳ್ಳಿ : ಪ್ರತಿಲಿಪಿಯಲ್ಲಿನ ನಿಮ್ಮ ನೆಚ್ಚಿನ ಬರಹಗಾರರನ್ನು ಹಿಂಬಾಲಿಸುವ ಮೂಲಕ ಅವರ ಹೊಚ್ಚಹೊಸ ಪ್ರಕಟಿತ ಬರಹಗಳ ಬಗ್ಗೆ ನೀವು ತಕ್ಷಣವೇ ತಿಳಿಯಬಹುದು. ಹಾಗೆಯೇ, ಅವರ ಬರಹಗಳಿಗೆ ರೇಟಿಂಗ್ಸ್ ನೀಡುವ ಮತ್ತು ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುವ ಮೂಲಕ ಅವರನ್ನು ಮತ್ತಷ್ಟು, ಮಗದಷ್ಟು ಬರೆಯಲು ಪ್ರೋತ್ಸಾಹಿಸಬಹುದು. ಆ ಮೂಲಕ ನಿಮ್ಮ ನೆಚ್ಚಿನ ಲೇಖಕರು ಹಾಗೂ ಪ್ರತಿಲಿಪಿಯೊಂದಿಗೆ ಸಕ್ರಿಯವಾಗಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಬಹುದು.ಪ್ರತಿಲಿಪಿ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ನಿಮ್ಮ ಜಿಮೈಲ್ ಅಥವಾ ಫೇಸ್ಬುಕ್ ಖಾತೆಯ ಮೂಲಕ ಪ್ರತಿಲಿಪಿ ಪ್ರೊಫೈಲ್ ಕ್ರಿಯೇಟ್ ಮಾಡಿಕೊಳ್ಳಿ.ಬಳಿಕ ಲಕ್ಷಾಂತರ ಕನ್ನಡ ಬರಹಗಳನ್ನು ಸಂಪೂರ್ಣ ಉಚಿತವಾಗಿ ಓದಬಹುದು.ನೀವು ಪ್ರತಿಲಿಪಿಯಲ್ಲಿ ಪ್ರಕಟಗೊಂಡಿರುವ ಕಥೆ,ಕವಿತೆ,ಲೇಖನಗಳನ್ನು ಓದಿ ಆಯಾ ಕರ್ತೃಗಳಿಗೆ ನಿಮ್ಮ ಅಭಿಪ್ರಾಯ ಅಥವಾ ಬರಹದ ವಿಮರ್ಶೆಯನ್ನು ನೇರವಾಗಿ ತಲುಪಿಸಬಹುದು.
ಪ್ರತಿ ತಿಂಗಳೂ ನೆಡೆಯುವ ಕಥಾ/ಕವನ ಸ್ಪರ್ಧೆಯಲ್ಲಿ ಭಾಗವಹಿಸಿ ಆಕರ್ಷಕ ಬಹುಮಾನಗಳನ್ನೂ ಗೆಲ್ಲಬಹುದು.
ಇಷ್ಟೇ ಅಲ್ಲದೆ ನಿಮ್ಮೊಳಗಿನ ಸಾಹಿತಿಯನ್ನು/ಓದುಗನನ್ನು ಉದ್ದೀಪನಗೊಳಿಸಿ ನಿಮ್ಮನ್ನು ಹೆಚ್ಚು ಓದಲು ಮತ್ತು ಬರೆಯಲು ಪ್ರೇರೇಪಿಸುವ ಹತ್ತಾರು ಆಕರ್ಷಕ ಸೌಲಭ್ಯಗಳು ಪ್ರತಿಲಿಪಿಯಲ್ಲಿವೆ.
ಬನ್ನಿ ಕನ್ನಡ ಸಾಹಿತ್ಯದ ಹೊಸ ಪ್ರಪಂಚ ನಿಮಗಾಗಿ ಕಾದಿದೆ.
Website - https://kannada.pratilipi.com/
ಅಪ್‌ಡೇಟ್ ದಿನಾಂಕ
ಏಪ್ರಿ 29, 2025