Google One ಆ್ಯಪ್ ನಿಮ್ಮ ಫೋನ್ ಅನ್ನು ಸ್ವಯಂಚಾಲಿತವಾಗಿ ಬ್ಯಾಕಪ್ ಮಾಡಲು ಮತ್ತು ನಿಮ್ಮ Google ಕ್ಲೌಡ್ ಸಂಗ್ರಹಣೆಯನ್ನು ನಿರ್ವಹಿಸಲು ನಿಮಗೆ ಅನುಮತಿಸುತ್ತದೆ.
• ಪ್ರತಿಯೊಂದು Google ಖಾತೆಯೊಂದಿಗೆ ನಿಮಗೆ ದೊರೆಯುವ 15 GB ಸಂಗ್ರಹಣೆಯನ್ನು ಬಳಸಿಕೊಂಡು ಫೋಟೋಗಳು, ಸಂಪರ್ಕಗಳು ಮತ್ತು ಸಂದೇಶಗಳಂತಹ ನಿಮ್ಮ ಫೋನ್‌ನಲ್ಲಿನ ಪ್ರಮುಖವಾದ ಸಂಗತಿಗಳನ್ನು ಸ್ವಯಂಚಾಲಿತವಾಗಿ ಬ್ಯಾಕಪ್ ಮಾಡಿ. ನಿಮ್ಮ ಫೋನ್ ಒಡೆದುಹೋದರೆ, ಕಳೆದುಹೋದರೆ ಅಥವಾ ಅಪ್‌ಗ್ರೇಡ್ ಮಾಡಿದರೆ, ನೀವು ಅದರಲ್ಲಿದ್ದ ಎಲ್ಲ ವಿಷಯವನ್ನೂ ನಿಮ್ಮ ಹೊಸ Android ಸಾಧನದಲ್ಲಿ ಮರುಸ್ಥಾಪಿಸಬಹುದು.
• Google Drive, Gmail ಮತ್ತು Google Photos ನಾದ್ಯಂತ ನಿಮ್ಮ ಪ್ರಸ್ತುತ Google ಖಾತೆಯ ಸಂಗ್ರಹಣೆಯನ್ನು ನಿರ್ವಹಿಸಿ.
ಇನ್ನೂ ಹೆಚ್ಚಿನದನ್ನು ಪಡೆಯಲು Google One ಸದಸ್ಯತ್ವಕ್ಕೆ ಅಪ್‌ಗ್ರೇಡ್ ಮಾಡಿಕೊಳ್ಳಿ:
• ನಿಮ್ಮ ಮುಖ್ಯವಾದ ನೆನಪುಗಳು, ಪ್ರಾಜೆಕ್ಟ್‌ಗಳು ಮತ್ತು ಡಿಜಿಟಲ್ ಫೈಲ್‌ಗಳಿಗಾಗಿ ನಿಮಗೆ ಬೇಕಾದಷ್ಟು ಸಂಗ್ರಹಣೆಯನ್ನು ಪಡೆಯಿರಿ. ನಿಮಗೆ ಸರಿಹೊಂದುವ ಪ್ಲಾನ್ ಅನ್ನು ಆಯ್ಕೆ ಮಾಡಿ.
ಅಪ್‌ಡೇಟ್ ದಿನಾಂಕ
ಏಪ್ರಿ 28, 2025