ಯುದ್ಧ ಮತ್ತು ಮ್ಯಾಜಿಕ್ ಸೇರಿ ವಾರ್ ಲೆಜೆಂಡ್ಸ್ ಅನ್ನು ಸೃಷ್ಟಿಸಲಾಗಿದೆ - ಇದು ಓರ್ಕ್ಸ್ ಮತ್ತು ಮಾನವರು, ಎಲ್ವೆಸ್ ಮತ್ತು ಕುಬ್ಜರು, ತುಂಟ ಬೇತಾಳಗಳು, ಜೀವಂತ ಶವಗಳು, ವೀರಕಾವ್ಯದ ನಾಯಕರು ಮತ್ತು ಮ್ಯಾಜಿಕ್ ಮಂತ್ರಗಳ ಫ್ಯಾಂಟಸಿ ಪ್ರಪಂಚವನ್ನು ಒಳಗೊಂಡ ನಿಜವಾದ ಅತ್ಯುತ್ತಮ ರಿಯಲ್-ಟೈಮ್ ತಂತ್ರದ ಗೇಮ್ ಆಗಿದೆ.
(War Legend)s ವಾರ್ ಲೆಜೆಂಡ್ಸ್ ಎಂಬುದು ಪರ್ಸನಲ್ ಕಂಪ್ಯೂಟರ್ನಲ್ಲಿದ್ದ ಪೌರಾಣಿಕ ಆರ್‌ಟಿಎಸ್ ಆಟಗಳಿಂದ ಪ್ರೇರಿತವಾದ ಒಂದು ಅನನ್ಯ ಮೊಬೈಲ್ ಆನ್‌ಲೈನ್ ರೀಯಲ್-ಟೈಮ್ ಕೌಶಲ್ಯದ ವಾರ್ ಗೇಮ್! ಇದು ನಿಮ್ಮ ಮೊಬೈಲ್ ಸಾಧನಕ್ಕೆ ಎಲ್ಲಾ ಕ್ಲಾಸಿಕ್ ಆರ್‌ಟಿಎಸ್ ಗೇಮ್ನ ಮೆಕ್ಯಾನಿಕ್ಸ್ ಅನ್ನು ಒದಗಿಸುತ್ತದೆ. ನಿಮ್ಮ ನೆಲೆಯನ್ನು ನಿರ್ಮಿಸಿ, ಚಿನ್ನ ಮತ್ತು ಕಟ್ಟಿಗೆಯಂತಹ ಗಣಿ ಸಂಪನ್ಮೂಲಗಳು, ಯೋಧರನ್ನು ನೇಮಿಸಿ, ಯುದ್ಧ ಯಂತ್ರಗಳನ್ನು ತಯಾರಿಸಿ ಮತ್ತು ಶತ್ರುಗಳ ಮೇಲೆ ದಾಳಿ ಮಾಡಲು ಮತ್ತು ವಿಜಯದತ್ತ ಸಾಗಲು ವೀರಕಾವ್ಯದ ವೀರರನ್ನು ಬಳಸಿ. ಪಿವಿಪಿ ಸಂಘರ್ಷದಲ್ಲಿ ನಿಮ್ಮ ಸೈನ್ಯವನ್ನು ಆಜ್ಞಾಪಿಸಿ ಮತ್ತು ನಿಯಂತ್ರಿಸಿ, ವ್ಯಾಪಕ ಶ್ರೇಣಿಯ ಟೀಮ್‌ಫೈಟ್ ತಂತ್ರಗಳನ್ನು ಬಳಸಿ, ಮ್ಯಾಜಿಕ್ ಮಂತ್ರಗಳನ್ನು ಉಪಯೋಗಿಸಿ, ಶತ್ರು ನೆಲೆಗಳ ಮೇಲೆ ಮುತ್ತಿಗೆ ಹಾಕಿ ಹಾಗೂ ಫ್ಯಾಂಟಸಿ ಜಗತ್ತನ್ನು ವಶಪಡಿಸಿಕೊಳ್ಳಿ.
ಬೆಳಕು ಮತ್ತು ಕತ್ತಲೆಯ ಹೊಂದಾಣಿಕೆ ನಡುವಿನ ಮುಗಿಯದ ಮುಖಾಮುಖಿಯಲ್ಲಿ ನಿಮ್ಮ ಪಕ್ಷವನ್ನು ಆಯ್ಕೆ ಮಾಡಿ. ಆರು ಫ್ಯಾಂಟಸಿ ಜನಾಂಗಗಳು ನಿಮಗಾಗಿ ಕಾಯುತ್ತಿವೆ. ಅವುಗಳಲ್ಲಿ ಪ್ರತಿಯೊಂದೂ ವಿಶಿಷ್ಟವಾದ ಯುದ್ಧ ವೈಶಿಷ್ಟ್ಯಗಳನ್ನು ಹೊಂದಿವೆ! ಎಲ್ವೆಸ್‌ಗಳ ಗುಣಪಡಿಸುವ ಮ್ಯಾಜಿಕ್, ಶವಗಳ ಕರಾಳ ಆಚರಣೆಗಳು, ಮಾನವರ ವಿಶ್ವಾಸಾರ್ಹ ಬ್ಲೇಡ್, ಓರ್ಕ್‌ಗಳ ಕೋಪ, ತುಂಟ ಬೇತಾಳದ ಹುಚ್ಚು ಆವಿಷ್ಕಾರಗಳು ಮತ್ತು ಕುಬ್ಜರ ಅಸಾಧಾರಣ ತಂತ್ರಜ್ಞಾನ - ಪಿವಿಇ ಮತ್ತು ಪಿವಿಪಿ ಯುದ್ಧಗಳಲ್ಲಿ ಗೆಲ್ಲಲು ಅವುಗಳನ್ನು ಬುದ್ಧಿವಂತಿಕೆಯಿಂದ ಬಳಸಿ.
ಈ ಎಮ್ಎಮ್ಒ ಆರ್‌ಟಿಎಸ್ ಆಟವು ಸರಳ ಪಿವಿಪಿ ಯುದ್ಧಗಳಿಂದ ಹಿಡಿದು 2ಎದುರು2 ಮತ್ತು 3ಎದುರು3 ಟೀಮ್‌ಫೈಟ್‌ಗಳು, ಎಫ್ಎಫ್ಎ ಘರ್ಷಣೆಗಳು, ಒಂದು ಅಖಾಡ ಮತ್ತು ವೀರಕಾವ್ಯದ ಬಹುಮಾನಗಳೊಂದಿಗೆ ಪಂದ್ಯಾವಳಿಗಳವರೆಗೆ ವಿವಿಧ ಸ್ಪರ್ಧಾತ್ಮಕ ಮಲ್ಟಿಪ್ಲೇಯರ್ ಯುದ್ಧ ವಿಧಾನಗಳನ್ನು ಒಳಗೊಂಡಿದೆ. ನಿಮ್ಮ ಕುಲವನ್ನು ಲೀಡರ್‌ಬೋರ್ಡ್‌ನ ಮೇಲಕ್ಕೆ ಕೊಂಡೊಯ್ಯಲು ಸಹಕಾರಿ ಯುದ್ಧಗಳಲ್ಲಿ ನಿಮ್ಮ ಕುಲದವರೊಂದಿಗೆ ನಿಮ್ಮ ತಂತ್ರಗಳನ್ನು ಬುದ್ಧಿವಂತಿಕೆಯಿಂದ ಸಂಯೋಜಿಸಿ.
ವಾರ್ ಲೆಜೆಂಡ್ಸ್ ಎಂಬುದು ನಿಮ್ಮ ಸೈನ್ಯವನ್ನು ಉತ್ತಮಗೊಳಿಸಲು ನಿಮಗೆ ಅನುಮತಿಸುವ ಉಚಿತವಾಗಿ-ಆಡುವ ಗೇಮ್ ತಂತ್ರದ ಆಟವಾಗಿದೆ—ಘಟಕಗಳು, ವೀರರು, ಕಟ್ಟಡಗಳು ಮತ್ತು ಸುರುಳಿಗಳು. ನಿಮ್ಮ ಘಟಕಗಳು ಮತ್ತು ವೀರರನ್ನು ಕಸ್ಟಮೈಸ್ ಮಾಡಲು ವಿವಿಧ ವಸ್ತುಗಳು ನಿಮಗೆ ಮುಗಿಯದ ಸಾಧ್ಯತೆಗಳನ್ನು ನೀಡುತ್ತವೆ. ಇದು ಅನನ್ಯ ಗೆಲುವಿನ ತಂತ್ರಗಳನ್ನು ಆವಿಷ್ಕರಿಸಲು ನಿಮಗೆ ಅನುವು ಮಾಡಿಕೊಡುತ್ತದೆ. ಇದು ಕೌಶಲ್ಯ ಆಧಾರಿತ ಆಟವಾಗಿದ್ದು, ಅಲ್ಲಿ ನಿಮ್ಮ ಕೌಶಲ್ಯವು ಅತ್ಯಗತ್ಯವಾಗಿರುತ್ತದೆ.
★ ಕ್ಲಾಸಿಕ್ ಆರ್‌ಟಿಎಸ್ ಗೇಮ್ ಪ್ರಕಾರದ ಕ್ಲಾಸಿಕ್ ಪಿಸಿ ಹಿಟ್‌ಗಳಿಂದ ಎಲ್ಲಾ ಅತ್ಯುತ್ತಮ ಯಂತ್ರಶಾಸ್ತ್ರಗಳನ್ನು ಪಡೆದುಕೊಂಡಿದೆ.
★ ಅದ್ಭುತ ಪಿವಿಪಿ, 2ಎದುರು2, 3ಎದುರು3 ಮತ್ತು ಸಹಕಾರಿ ಕದನಗಳನ್ನು (ಕೂಪ್) ಹೊಂದಿರುವ ಮಲ್ಟಿಪ್ಲೇಯರ್ ಆಟ.
★ ನಿಮ್ಮ ಸ್ನೇಹಿತರೊಂದಿಗೆ ಪಿವಿಪಿ ಕದನಗಳನ್ನು ಕಷ್ಟಮ್ ಮಾಡಿ. ಒಂದು ಆನ್‌ಲೈನ್ ಕದನದಲ್ಲಿ 6 ಆಟಗಾರರು ಆಡಲು ಅವಕಾಶವಿದೆ.
★ ಅದ್ಭುತವಾದ ವಿವರವಾದ 3ಡಿ ಗ್ರಾಫಿಕ್ಸ್ ನೀವು ಸಂಪೂರ್ಣವಾಗಿ ತಲ್ಲೀನರಾಗಿ ಆಡುವಂತೆ ಮಾಡುತ್ತದೆ.
★ ಆರು ಐಕಾನಿಕ್ ಫ್ಯಾಂಟಸಿ ಜನಾಂಗಗಳು: ಓರ್ಕ್ಸ್ ಮತ್ತು ಮಾನವರು, ಎಲ್ವೆಸ್ ಮತ್ತು ಕುಬ್ಜರು, ತುಂಟ ಬೇತಾಳಗಳು ಮತ್ತು ಶವಗಳು.
★ ಪ್ರಬಲ ಮಂತ್ರಗಳನ್ನು ಒಳಗೊಂಡ ಯುದ್ಧ ಜಾದೂ ಶಾಸನಗಳು.
★ ಇದು ಎಮ್ಎಮ್ಒ ತಂತ್ರದ ಗೇಮ್. ಜಗತ್ತಿನಾದ್ಯಂತ ಸಾವಿರಾರು ಆಟಗಾರರು ಆನ್‌ಲೈನ್‌ನಲ್ಲಿದ್ದಾರೆ.
★ ನಿಮ್ಮ ಸೇನೆಯನ್ನು ಅಪ್‌ಗ್ರೇಡ್ ಮಾಡಿ ಹಾಗೂ ಕಸ್ಟಮೈಸ್ ಮಾಡಿ.
★ ಬದುಕುಳಿಯುವ ಕಾರ್ಯಾಚರಣೆಗಳನ್ನು ಒಳಗೊಂಡಂತೆ, ಎರಡೂ ಕಡೆಗೂ ಬೃಹತ್ ಕಥೆ-ಚಾಲಿತ ಪಿವಿಇ-ಅಭಿಯಾನ.
★ ಕುಲದ ಯುದ್ಧಗಳಲ್ಲಿ ಹೋರಾಡಲು ಸ್ನೇಹಿತರೊಂದಿಗೆ ತಂಡವನ್ನು ರಚಿಸಿಕೊಳ್ಳಿ.
ಈ ಆನ್‌ಲೈನ್ ರಿಯಲ್-ಟೈಮ್ (ಆರ್‌ಟಿಎಸ್) ಯುದ್ಧ ತಂತ್ರದ ಆಟವು ಒಳ್ಳೆಯದು ಹಾಗೂ ಕೆಟ್ಟದ್ದರ ನಡುವಿನ ಶಾಶ್ವತ ಮುಖಾಮುಖಿಯಲ್ಲಿ ನಿಮ್ಮನ್ನು ಸೇನಾಧಿಪತಿ ಎಂದು ಭಾವಿಸುವಂತೆ ಮಾಡುತ್ತದೆ. ಆಜ್ಞೆ ಮಾಡಿ, ವಶಪಡಿಸಿಕೊಳ್ಳಿ, ನಿಮ್ಮ ಕೋಟೆಯನ್ನು ನಿರ್ಮಿಸಿ, ವೀರಕಾವ್ಯದ ವೀರರನ್ನು ಕರೆಸಿ ಮತ್ತು ನಿಮ್ಮ ಸೈನ್ಯವನ್ನು ವಿಜಯದತ್ತ ಕೊಂಡೊಯ್ಯಲು ಜಾದೂ ಮಂತ್ರಗಳನ್ನು ಪ್ರಯೋಗಿಸಿ. ನಿಮ್ಮ ಸೈನ್ಯವನ್ನು ಅಪ್‌ಗ್ರೇಡ್ ಮಾಡಿ ಮತ್ತು ನಿಮ್ಮ ಘಟಕಗಳು ಮತ್ತು ವೀರರನ್ನು ಕಸ್ಟಮೈಸ್ ಮಾಡಲು ರಕ್ಷಾಕವಚ, ಆಯುಧಗಳು ಮತ್ತು ಜಾದೂ ತಾಯತಗಳಂತಹ ಅನನ್ಯ ವಸ್ತುಗಳನ್ನು ರಚಿಸಿ.
(War Legends) ವಾರ್ ಲೆಜೆಂಡ್ಸ್ ಒಂದು ಹೆಚ್ಚಿನ ಆಟಗಾರರು ಆಡುವ ಆನ್‌ಲೈನ್ ಗೇಮ್ ಆಗಿದೆ. ಇದಕ್ಕೆ ನಿರಂತರ, ಸ್ಥಿರವಾದ ಇಂಟರ್ನೆಟ್ ಸಂಪರ್ಕದ ಅಗತ್ಯವಿದೆ. ಇಂಟರ್ನೆಟ್ ಇಲ್ಲದೆ (ಆಫ್‌ಲೈನ್) ಇದು ಕಾರ್ಯನಿರ್ವಹಿಸುವುದಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.
ಆಟ ಆಡುವಾಗ ನಿಮಗೆ ಯಾವುದೇ ಸಮಸ್ಯೆಗಳು ಎದುರಾದರೆ ಅಥವಾ ಹಂಚಿಕೊಳ್ಳಲು ನೀವು ಬಯಸುವ ಆಲೋಚನೆಗಳಿದ್ದರೆ, ದಯವಿಟ್ಟು hello@spirecraft.games ನಲ್ಲಿ ನಮ್ಮನ್ನು ಸಂಪರ್ಕಿಸಿ. ನಿಮ್ಮ ಪ್ರತಿಕ್ರಿಯೆಯನ್ನು ನಾವು ಗೌರವಿಸುತ್ತೇವೆ ಮತ್ತು ನಮ್ಮ ಗೇಮ್ಗಳನ್ನು ಇನ್ನಷ್ಟು ಉತ್ತಮಗೊಳಿಸಲು ಮತ್ತು ನಮ್ಮ ಆಟಗಾರರಿಗೆ ಹೆಚ್ಚು ಆನಂದದಾಯಕವಾಗಿಸಲು ಅವುಗಳನ್ನು ಸುಧಾರಿಸಲು ನಾವು ಬದ್ಧರಾಗಿದ್ದೇವೆ.
ಅಪ್‌ಡೇಟ್ ದಿನಾಂಕ
ಏಪ್ರಿ 28, 2025